Wednesday, December 5, 2018

ಕಣ್ಣಲಿ ಕಣ್ಣಂಚಲಿ
ಮಿಂಚುವ ಹೊಳಪು
ತುಟಿಯಲಿ ತುಟಿಯ ಕೊನೆಯಲಿ
ಬರುವ ಕಿರುನಗು

ಮುಖದಲಿ ಮುಖದ ನಗುವಲಿ
ಇರುವ ಮಂದಹಾಸ
ಹೃದಯದಲಿ ಹೃದಯದ ಒಡಲಲಿ
ಚಿಮ್ಮುವ ಪ್ರೀತಿಯ ಚಿಲುಮೆ

ಬಾಳಲಿ ಬಾಳ ಜೊತೆಯಲಿ
ನಡೆವ ಸಂಗತಿ ನೀ...
ನಿನಗೆ ನಿನಗಾಗಿ
ನನ್ನ ಪ್ರೀತಿಯ ನಿವೇದನೆ 

No comments:

Post a Comment