Tuesday, June 15, 2021

 

ಕಣ್ಣಿಗೆ ಎಣ್ಣೆ ಬಿಟ್ಟು ನೋಡುತಿರುವೆ 

ನೀ ಬರುವ ದಾರಿಯ ...

ನೀ ನಿಲ್ಲದೆ ಸಾಗಿಸುತ್ತಿರುವೆ

ಬಾಳ ದೋಣಿಯ...

ಕಂಡೆ ಸ್ನೇಹದ ನಿಜವಾದ
 ಅರ್ಥವನ್ನು ನಿನ್ನಲ್ಲಿ...
ಕಾಣ ಬಯಸುವೆ ನಿನ್ನನು 
 ನನ್ನ ಜೀವನದಲ್ಲಿ...

Wednesday, December 5, 2018

ಕಣ್ಣಲಿ ಕಣ್ಣಂಚಲಿ
ಮಿಂಚುವ ಹೊಳಪು
ತುಟಿಯಲಿ ತುಟಿಯ ಕೊನೆಯಲಿ
ಬರುವ ಕಿರುನಗು

ಮುಖದಲಿ ಮುಖದ ನಗುವಲಿ
ಇರುವ ಮಂದಹಾಸ
ಹೃದಯದಲಿ ಹೃದಯದ ಒಡಲಲಿ
ಚಿಮ್ಮುವ ಪ್ರೀತಿಯ ಚಿಲುಮೆ

ಬಾಳಲಿ ಬಾಳ ಜೊತೆಯಲಿ
ನಡೆವ ಸಂಗತಿ ನೀ...
ನಿನಗೆ ನಿನಗಾಗಿ
ನನ್ನ ಪ್ರೀತಿಯ ನಿವೇದನೆ